Wednesday, November 29, 2006

ಕಲಿಕೆಯಲಿ ಇವರು ಏಕಲವ್ಯ್ರರೇ ಎಲ್ಲ.
ಕಲಿಸದೇ ಕಲಿಯುವರು ಕೆಟ್ಟ ಚಟಗಳನೆಲ್ಲಾ...

Thursday, November 23, 2006

ಜೀವನ..

ನೆನಪುಗಳ ಕದತಟ್ಟಿ,
ಭಾವನೆಗಳ ಲೇಖನಿಯಲಿ,
ಮನಸಿನ ಪುಟಗಳ ಮೇಲೆ
ಬರೆದೊಂದು ಕವನ..
ಅದುವೇ ನಮ್ಮ ಜೀವನ..
ನಲ್ಲೆಯ ಒಲುಮೆಗೆ ಮಾಪಕ ಬೇಕೆ..?
ಕಣ್ಣಲಿ ತುಂಬಿದ ಪ್ರೀತಿಯೆ ಸಾಕೆ..?

Monday, November 13, 2006

ವಿರಹ

ನನ್ನೆದೆಯ ಕೋಟೆಯನು ಬೇಧಿಸಿ ನೀ ಬಂದೆ
ಬರಡಾದ ಬದುಕಲ್ಲಿ ಹೊಸ ಹಸಿರು ತಂದೆ
ನೀನಿತ್ತ ಈ ಪ್ರೀತಿ ನಾ ಮರೆಯಲಾರೆ
ಅರೆ ಕ್ಷಣವೂ ವಿರಹವನು ನಾ ತಾಳಲಾರೆ.

Thursday, November 09, 2006

ದ್ವಾಪರದ ದುರ್ಯೊಧನನೂ ಬೆವರಿದ್ದನಂತೆ ನೀರಿನಲಿ ಭೀಮನ ದನಿ ಕೇಳಿ..
ಕಲಿಯುಗದ Software Engineer ಬೆವರಿದಂತೆ ಏಸಿ ರೂಮಿನಲಿ P.M. ದನಿ ಕೇಳಿ.
Deadlineನೇ ಇದಕೆಲ್ಲಾ ಕಾರಣ..

Wednesday, November 08, 2006

ಮನಸು..

ಮನಸೆಂಬ ದೋಣಿಯ ಪಯಣಿಗನು ನಾನು
ನೆನಪೆಂಬ ಬಿರುಗಾಳಿ ಬೀಸದಿರು ನೀನು.
ಸವಿಸುಖದ ಕಹಿನೆನಪ ಮರೆತಿಹೆನು ನಾನು
ತಿಳಿಯಾದ ಎದೆಗೊಳವ ಕಲುಕದಿರು ನೀನು.
ಎಂದು ಬರುವೆ..?

ನನ್ನವಳ ಬಣ್ಣಿಸಲು ಶಬ್ದಗಳೇ ಸಾಲದು
ಬಣ್ಣಿಸದೆ ಹೋದರೆ ಮನಸು ತಾ ಕೇಳದು

ಆ ಕಣ್ಣ ನೋಟಕ್ಕೆ ಸೋಲದವರಾರು
ಕಣ್ಣಂಚ ಮಿಂಚಿಗೆ ಹೆದರಿತು ಮುಂಗಾರು.

ಮುಂಗುರುಳು ನಲಿದಿತ್ತು ತಂಗಾಳಿ ಕರೆಗೆ
ಬೆರಗಾಗಿ ನೋಡಿತ್ತು ನವಿಲು ಆ ಪರಿಗೆ.

ಕೆಂದುಟಿಯ ಕಿರು ನಗೆಗೆ ಸರಿಸಾಟಿಯೆಲ್ಲಿ
ಜೇನು ತುಂಬಿದ ಹೂವು ಬಾಗಿಹುದು ಇಲ್ಲಿ.

ನಾಸಿಕವು ಸಂಪಿಗೆಯು ನಾಚುವಂತೆ
ಆಗಸದ ತಾರೆಯೇ ನೊತ್ತಿನಂತೆ.

ಕೊಗಿಲೆಯ ಇನಿದನಿಯು ಕೊರಳಿನೊಳಗೆ
ಹಂಸದಾ ಹೋಲಿಕೆಯು ನಡಿಗೆಯೊಳಗೆ.

ನೀಳ ಜಡೆಯನು ಹೊತ್ತ ಇವಳೇ ಫಣಿವೇಣಿ
ನನ್ನೆದೆಯ ರಾಜ್ಯಕ್ಕೆ ನೀನೇ ಮಹಾರಾಣಿ.

ಮನದ ಬಾಗಿಲು ತೆರೆದು ಕಾಯುತ್ತಲಿರುವೆ
ಓ ನನ್ನ ಮನದನ್ನೆ ಎಂದು ನೀ ಬರುವೆ..?

Tuesday, November 07, 2006

ಅಂದು..
ಅಂದು ಅವಳು ನಕ್ಕಾಗ..
ಮಳೆಬಿಲ್ಲು,ಹೂಮಳೆ.
ಇಂದು
ಹೊರೆ Bill ಜಡಿ ಮಳೆ.
ಆಸೆ..

ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನೆಡೆಯುವ ಆಸೆ..
ಹೊಗೆಯನು ಕಾರುವ ಟ್ರಾಫಿಕ್ ಗೆ ಸಿಕ್ಕದೆ ಬೇಗ ಮನೆಸೇರುವಾಸೆ...
Software

ಎಲ್ಲಾ ಹುಡುಗೆಗೂ ಬೇಕು
Software ಗಂಡ
ಇದೇನಿದು...
Software ಗಂಡಾ..?
City

ನಾಗರೀಕ: ನಮ್ಮಿಂದ ಬೆಳೆದಿದೆ Bangalore City.
ಇಂಜಿನಿಯರ್: ನಮ್ಮಿಂದ ಬೆಳೆದಿದೆ Electronic City.
ಕುಡುಕ : ನಮ್ಮಿಂದ ಬೆಳೆಯುತಿದೆ UB City.

Monday, November 06, 2006

ಒಂದು ಸಿನಿಮಾ ಕಥೆ...

ಕೆಲಸವಿಲ್ಲದ ಬಡಗಿ ಏನೊ ಮಾಡಿದ್ನಡ.. ಹಂಗಾತು ಅವತ್ತು. ಮಳೆ ಬರ್ತಿತ್ತು.. ಒಳ್ಳೆ ಛಳಿ ಬೆರೆ ಇತ್ತು.. ಸುಮ್ನೆ ಮನೆಲಿ ಕಂಬಳಿ ಹೊದ್ದು ಮಲ್ಗದು ಬಿಟ್ಟು ಹಿರೇತನ ಮಾಡ್ಕ್ಯಂಡು ಸಿನಿಮಾ ನೊಡಕ್ಕೆ ಹೊದ್ಯ ಅಂತಾತು.ಅದೂ ಯಾವ್ದು.."ಉಮ್ರಾವೊ ಜಾನ್".

ಮಳೆ ಸಣ್ಣಗೆ ಬರ್ತಿತ್ತು, ಜಾಕೆಟ್, ಹೆಲ್ಮೆಟ್ ಹಾಕ್ಯಂಡು ಕಾಮಾಕ್ಯ ಥಿಯೇಟರ್ ಹತ್ರ ಹೊದ್ಯ. ಅಲ್ಲೇ ಪಕ್ಕದ ಹೊಟಲ್ಲಗೆ ಲೈಟಾಗಿ ಊಟ ಮಾಡಿದ್ಯ. ಸಿನಿಮಕ್ಕೆ ಜನ ಜಾಸ್ತಿಯೇನು ಬಂದಿರ್ಲೆ. ಅವಾಗ್ಲೆ ಹೇಳಿದಿ ಎಲ್.ಡಿಗೆ.. ಇವತ್ತೊಂದು ಕೆಟ್ಟ ಸಿನಿಮಾ ನೊಡ ಸೀನ್ ಇದ್ದು ಅಂತ. ಸರಿ ಅಲ್ಲಿವರೆಗೆ ಬಂದಮೇಲೆ ಯೋಚನೆ ಮಾಡದೆಂತು ಅಂತ ಒಳಗೆ ಹೊದ್ಯ. ಅವಾಗ್ಲೆ ಸಿನಿಮಾ ಶುರುವಾಗಿತ್ತು. ಒಳಗೆಲ್ಲಾ ಖಾಲಿ ಇತ್ತು.ಒಳ್ಳೆ ಸೀಟು ಹುಡುಕಕ್ಕೆ ಶುರು ಮಾಡಿದ್ರೆ ಸಿಗಹೊತ್ತಿಗೆ ಸಿನಿಮಾ ಮುಗಿತು ಅಂತ ಸಿಕ್ಕಿದ ಸೀಟಲ್ಲೇ ಕೂತ್ಕಂಡ್ಯ. ಸಿನಿಮಾ ಶುರುವಾಗಿತ್ತು.. ಆದ್ರೂ ಐಶ್ವರ್ಯ ಒಡ್ಡೊಲಗ ಆಗಲ್ಲೆ ಇನ್ನೂ ಅಂತ ಸಮಾಧಾನ ಮಾಡ್ಕ್ಯಂಡು ಕುಂತ್ಯ. ಕಥೆ ಈಗ ಶುರುವಾಗ್ತು..ಈಗ ಶುರುವಾಗ್ತು.. ಅಂತ ಕಾದಿದ್ದೆ ಬಂತು.. ಯಂತದೂ ಗೊತ್ತಾಗದಿಲ್ಲೆ.. ಅದೆನು ಹಿಂದಿನೊ.. ಉರ್ದುನೊ.. ಏನೂ ತಿಳಿಯಲ್ಲೆ..ಐಶ್ವರ್ಯ ಡ್ಯಾನ್ಸ್ ಮಾಡಕ್ಕೆ ಶುರು ಮಾಡಿದ. ತಗಳ್ಳಪ್ಪ.. ಹಾಡು ಶುರುವಾತು. ಏನು ಹಾಡು.. ಏನು ಡ್ಯಾನ್ಸು ಏನು ಕಥೆ..ತಲೆ ಬುಡ ತಿಳಿಯಲ್ಲೆ...ಹೊಗ್ಲಿ ನಿದ್ದೆನಾದ್ರು ಮಾಡನ ಅಂದ್ರೆ ಸೀಟು ಸರಿಯಿಲ್ಲೆ..ಅಂತೂ ಇಂತೂ ಹೊದ ತಪ್ಪಿಗೆ ಪೂರ್ತಿ ಸಿನಿಮಾ ನೊಡಿ ತಲೆ ಕೆಟ್ಟು.. ಮನೆಗೆ ಬರಹೊತ್ತಿಗೆ 12:30 ಆಗಿತ್ತು. ಇನ್ನು ಯಾವತ್ತೂ ಯಾವುದೆ ಸಿನಿಮಕ್ಕೆ ಫಸ್ಟ್ ಡೇ ಹೊಗಲಾಗ ಅಂತ ತೀರ್ಮಾನ ಮಾಡಿ ಮಲ್ಗಿದ್ಯ.

Film: Umravo Jaan
Date:03:11:2006 9:30 PM
Place:ಕಾಮಾಕ್ಯ

Members:
Me (Bava)
Harsha
Suhas
L D (Ganesh)
Thomas (Vishwa Rao)