ಎಂದು ಬರುವೆ..?
ನನ್ನವಳ ಬಣ್ಣಿಸಲು ಶಬ್ದಗಳೇ ಸಾಲದು
ಬಣ್ಣಿಸದೆ ಹೋದರೆ ಮನಸು ತಾ ಕೇಳದು
ಆ ಕಣ್ಣ ನೋಟಕ್ಕೆ ಸೋಲದವರಾರು
ಕಣ್ಣಂಚ ಮಿಂಚಿಗೆ ಹೆದರಿತು ಮುಂಗಾರು.
ಮುಂಗುರುಳು ನಲಿದಿತ್ತು ತಂಗಾಳಿ ಕರೆಗೆ
ಬೆರಗಾಗಿ ನೋಡಿತ್ತು ನವಿಲು ಆ ಪರಿಗೆ.
ಕೆಂದುಟಿಯ ಕಿರು ನಗೆಗೆ ಸರಿಸಾಟಿಯೆಲ್ಲಿ
ಜೇನು ತುಂಬಿದ ಹೂವು ಬಾಗಿಹುದು ಇಲ್ಲಿ.
ನಾಸಿಕವು ಸಂಪಿಗೆಯು ನಾಚುವಂತೆ
ಆಗಸದ ತಾರೆಯೇ ನೊತ್ತಿನಂತೆ.
ಕೊಗಿಲೆಯ ಇನಿದನಿಯು ಕೊರಳಿನೊಳಗೆ
ಹಂಸದಾ ಹೋಲಿಕೆಯು ನಡಿಗೆಯೊಳಗೆ.
ನೀಳ ಜಡೆಯನು ಹೊತ್ತ ಇವಳೇ ಫಣಿವೇಣಿ
ನನ್ನೆದೆಯ ರಾಜ್ಯಕ್ಕೆ ನೀನೇ ಮಹಾರಾಣಿ.
ಮನದ ಬಾಗಿಲು ತೆರೆದು ಕಾಯುತ್ತಲಿರುವೆ
ಓ ನನ್ನ ಮನದನ್ನೆ ಎಂದು ನೀ ಬರುವೆ..?
No comments:
Post a Comment