ಗಿಡ
ನಾನೆಟ್ಟ ಸಸಿ ಬೆಳೆದು,
ಹಸಿರೊಡೆದು ಗಿಡವಾಗಿ,
ನೂರೆಂಟು ಚಿಗುರೊಡೆದು,
ತಂಪೆರೆವ ಮರವಾಗಿ,
ಮೊಗ್ಗರಳಿ ಹೂವಾಗಿ,
ಮಿಡಿಕಚ್ಚಿ ಕಾಯಾಗಿ,
ಹಣ್ಣಾಗಿ ಸವಿಯುಣುವ
ಭಾಗ್ಯವೆನಗಿಲ್ಲ
ಬರ ಸಿಡಿಲಿನ ಹೊಡೆತಕ್ಕೆ
ಮರವೊರಗಿತಲ್ಲ.
ಹುಚ್ಚು ಮನಸಿನ ಹತ್ತಾರು ಮುಖಗಳಲ್ಲಿ ಇದೂ ಒಂದು.... ನವಿಲುಗರಿಯ ತೆರೆದಿಡುವ ಯತ್ನ....
ಭವಿಷ್ಯ ಬರೆಯುವ IN(C)K ಆಗಬಹುದಿತ್ತು ಅರ್ಧದಲ್ಲೇ BLINK ಆಗಿ ಹೋದೆವು