Tuesday, May 27, 2008

ಓ ಮನಸೆ

ಎಲ್ಲಿರುವೆ ಓ ಮನಸೆ
ಕಾದಿರುವೆ ನಿನ್ನ
ಬಾ ಬೇಗ ಬಳಿಬಂದು
ತಬ್ಬಿಕೋ ನನ್ನ

ಬರಡಾದ ಮನದಲ್ಲಿ
ಪ್ರೀತಿ ಝರಿ ಚಿಮ್ಮಿಸಿ
ಉತ್ಸಾಹದ ಚಿಲುಮೆಯನು
ನನ್ನಲ್ಲಿ ಉಕ್ಕಿಸಿ

ನನ್ನನೊಬ್ಬನೆ ಬಿಟ್ಟು
ನೀ ದೂರ ಹೋದೆ
ಜೊತೆಯಾರೂ ಇಲ್ಲದೆ
ನಾ ಒಬ್ಬಂಟಿಯಾದೆ

ಕಲ್ಲನೆಸೆದು ನೀರನು
ನಾ ಕದಡಲಿಲ್ಲ
ನನ್ನೋಡಲ ಶಾಂತಿಯನು
ಕದಡಿರುವೆಯಲ್ಲ

ನಿನ್ನಿಂದ ಎನನ್ನೂ
ನಾ ಬಯಸಲಿಲ್ಲ
ನೀ ನನ್ನ ಜೋತೆಯಾಗು
ಈ ಜನ್ಮವೆಲ್ಲಾ

ನಿನ್ನ ನೆನಪಲಿ ಹಲವು
ಮಾಸಗಳು ಕಳೆದಿಹುದು
ನೀನನ್ನ ಸೇರುವ
ಆಸೆ ಬದುಕುಳಿದಿಹುದು

3 comments:

ಜಾತ್ರೆ said...

Registration- Seminar on the occasion of kannadasaahithya.com 8th year Celebration

ಪ್ರೀತಿಯ ಅಂತರ್ಜಾಲ ಸ್ನೇಹಿತರೆ,

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english

http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ

ಮನಸ್ವಿ said...

ಗಿರೀಶ್ ಭಟ್ ಅವರೇ ನಿಮ್ಮ ಹಾಗೆ ಸುಮ್ಮನೆ...(http://adnaadigalu.blogspot.com) ಯಾಕೆ ಹಾಗೆ ಖಾಲಿ ಉಳಿದಿದೆ ??
ಯಾಕೆ ಈ ಪ್ರಶ್ನೆ ಅಂದರೆ ನನ್ನ ಬ್ಲಾಗಿಗೂ ಹಾಗೇ ಸುಮ್ಮನೆ...(http://www.adibedur.blogspot.com ಅಂತಾನೆ ಟೈಟಲ್ ಕೊಟ್ಟಿದ್ದೆ !ನಿಮ್ಮ ಖಾಲಿ ಪುಟದ ಹಾಗೆ ಸುಮ್ಮನೆ ಲಿಂಕ್ ಬೇರೆ ಬ್ಲಾಗಿನಲ್ಲಿ ಕ್ಲಿಕ್ಕಿಸಿದವರು ಇನ್ನೆಲ್ಲಿಯೂ ಹಾಗೆ ಸುಮ್ಮನೆ ಕೊಂಡಿ ಇದ್ದರು ಕ್ಲಿಕ್ಕಿಸಲು ಇಷ್ಟ ಪಡುವುದಿಲ್ಲವೇನೋ ಅನಿಸಿತು ಅದಕ್ಕೆ ಹೇಳಿದೆ

Anonymous said...

ಮನಸ್ವಿಯವರೆ. ನನ್ನ ಬ್ಲಾಗನ್ನು "ಹಾಗೇ ಸುಮ್ಮನೆ" ಡಿಲೀಟ್ ಮಾಡಿದ್ದೇನೆ.